Tuesday, August 18, 2009

H1N1 (ಸ್ವಯಿನ್ ಪ್ಲೂ) - ತಡೆಗಟ್ಟೊದು ಹೇಗೆ?

ಏನಿದು ಎಚ್1ಎನ್1?
ಎಚ್1ಎನ್1 ಎಂಬುದು ಒಂದು ವೈರಸ್ ರೋಗಾಣು, ಇದರಿಂದ ಹರಡುವ ರೋಗ ಲಕ್ಷಣಗಳ ಸಮೂಹವೇ ಸ್ವಯನ್ ಪ್ಲೂ , ಸಾಮಾನ್ಯ ಶೀತದಂತೆ ಪ್ರಾರಂಭವಾಗುವಾಗುವ ಈ ರೋಗ ಸಾಂಕ್ರಾಮಿಕವಾಗಿ ಕ್ರಮೇಣ ನೀರು,ಗಾಳಿ,ಆಹಾರ, ಸೋಂಕಿತ ವ್ಯಕ್ತಿಯ ಸ್ಪರ್ಶ,ಹಾಗು ಇನ್ನಿತರ ಮಾದ್ಯಮಗಳ ಮೂಲಕ ಇತರರಿಗೂ ಹರಡುತ್ತದೆ..ಪ್ರಾರಂಭದಲ್ಲೆ ಗುರುತಿಸಿ ಸೂಕ್ತ ಚಿಕಿತ್ಸೆ ಕೊಡಿಸಿದರೆ ಅಪಾಯದಿಂದ ಪಾರಾಗಬಹುದು ಕೈ ಮೀರಿದರೆ ತೀವ್ರ ಉಸಿರಾಟದ ತೊಂದರೆ , ಹಾಗು ಇತರೆ ಅನಾರೋಗ್ಯ ಲಕ್ಷಣಗಳಿಂದ ರೋಗಿ ಸಾವನ್ನಪ್ಪುವ ಸಂಭವವಿದೆ.

ಈ ರೋಗದ ಲಕ್ಷಣ ಗಳೇನು?
ಸಾಮಾನ್ಯ ನೆಗಡಿ-ಶೀತ,ತಲೆ-ಬಾರ,ತಲೆ-ನೋವು, ಕೆಮ್ಮು-ಕಫ, ಗಂಟಲು-ಕೆರೆತ,
ಜ್ವರ-ಚಳಿ, ದೇಹದ ಅಂಗಾಂಗಗಳಲ್ಲಿ ನೋವು, ಸುಸ್ತು ಇವು ಪ್ರಾರಂಭಿಕ ಹಂತದ ರೋಗ ಲಕ್ಷಣಗಳು. ಈ ಲಕ್ಷಣಗಳ ಜೊತೆಗೆ ಒಂದೆರೆಡು ದಿನಗಳಲ್ಲಿ ಕ್ರಮೇಣ ಈ ಕೆಳಕಂಡ ರೋಗಚಿಹ್ನೆ ಗಳು ಉಲ್ಬಣಿಸಿದರೆ ಕೂಡಲೆ ಸಮೀಪದ ಆರೋಗ್ಯ ಕೇಂದ್ರ ದ ವೈದ್ಯರನ್ನು ಸಂಪರ್ಕಿಸಿ,
ಮಕ್ಕಳಲ್ಲಿ ರೋಗಚಿಹ್ನೆಗಳು
-> ವೇಗದ ಉಸಿರಾಟ ಮತ್ತು ಉಸಿರಾಟದಲ್ಲಿ ತೊಂದರೆ
-> ಚರ್ಮ ಕಪ್ಪು ಅಥವ ನೀಲಿ ಬಣ್ಣ ಕ್ಕೆ ತಿರುಗುವುದು
-> ದ್ರವ ರೂಪದ ಆಹಾರ ಪದಾರ್ಥಗಳನ್ನು ತಿನ್ನಲು ನಿರಾಕರಿಸುವುದು
-> ಪದೇ-ಪದೇ ವಿಪರೀತ ವಾಂತಿಯಾಗುದು
-> ಯಾರ ಜೊತೆ ಬೆರೆಯದೆ,ಮಾತನಾಡದೆ ಒಂಟಿಯಾಗಿರುವುದು
-> ಕೆಲವೊಮ್ಮೆ ಹಿಡಿಯಲಾರದಷ್ಟು ಅಳು-ಕಿರುಚಾಟ-ಕಿರಿಕಿರಿ
-> ವಿಪರೀತ ಶೀತ, ಕೆಮ್ಮು-ಕಫ, ಜ್ವರ

ವಯಸ್ಕರಲ್ಲಿ ರೋಗಚಿಹ್ನೆಗಳು
-> ತೀವ್ರ ಉಸಿರಾಟದ ತೊಂದರೆ
-> ಎದೆಯಲ್ಲಿ ,ಹೊಟ್ಟೆಯಲ್ಲಿ ವಿಪರೀತ ನೋವು ಹಾಗು ಒತ್ತಡ
-> ತಲೆ-ನೋವು, ಜ್ವರ , ತಲೆತಿರುಗುವಿಕೆ, ತಲೆಭಾರ
-> ಮನಸಲ್ಲಿ ಉದ್ವೇಗ, ಆತಂಕ, ಗಾಬರಿ, ಚಂಚಲತೆ,ಗೊಂದಲ,ದಿಗಿಲು
-> ಪದೇ-ಪದೇ ವಿಪರೀತ ವಾಂತಿಯಾಗುದು
-> ವಿಪರೀತ ಶೀತ, ಕೆಮ್ಮು-ಕಫ, ಜ್ವರ
ಈ ರೋಗಚಿಹ್ನೆ ಗಳು ಉಲ್ಬಣಿಸಿದರೆ ಕೂಡಲೆ ಸಮೀಪದ ಆರೋಗ್ಯ ಕೇಂದ್ರ ದ ವೈದ್ಯರನ್ನು ಸಂಪರ್ಕಿಸಿ,

ಇದರಿಂದ ರಕ್ಷಿಸಿಕೊಳ್ಳುವುದು ಹೇಗೆ?
ಪ್ರಾರಂಬಿಕ ಹಂತದಲ್ಲಿ ಸೂಕ್ತ ಚಿಕಿತ್ಸೆಯನ್ನು ನೀಡಿದರೆ ಹಾಗು ಈ ಕೆಳಗಿನ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಿದರೆ ಖಂಡಿತ ಈ ರೋಗವನ್ನು ತಡೆಗಟ್ಟಬಹುದು
-> ಜನಸಂದಣಿಯಲ್ಲಿ ,ಗುಂಪಿನ ಜೊತೆ ಬೆರೆಯಬೇಡಿ ಗುಂಪಿನಲ್ಲಿ ಯಾರಿಗಾದರು ಒಬ್ಬರಿಗಿದ್ದರೆ ಎಲ್ಲರಿಗು ಹರಡುತ್ತದೆ
-> ಈ ರೋಗಾಣು 2 ರಿಂದ 8 ಗಂಟೆಗಳ ತನಕ ಹರಡಿದ ಯಾವುದೇ ವಸ್ತುಗಳ ಮೇಲೆ ವಾತಾವರಣದಲ್ಲಿ ಬದುಕಿರಬಲ್ಲದು ಆದ್ದರಿಂದ ಸೋಂಕಿತ ವ್ಯಕ್ತಿಯ ಸಂಪರ್ಕದಿಂದ ದೂರವಿರಿ, ಅವರು ಬಳಸಿದ ವಸ್ತುಗಳನ್ನು ಮುಟ್ಟಬೇಡಿ. ಮನೆಗೆ ಬಂದಕ್ಷಣ ಸೋಪು, ಡೆಟಾಲ್ ನಿಂದ ಶುಭ್ರವಾಗಿ ಕೈ ಕಾಲುಗಳನ್ನು ತೊಳೆದುಕೊಳ್ಳಿ, ಸಾದ್ಯವಾದರೆ ಬಿಸಿನೀರಿನಿಂದ ಸ್ನಾನ ಮಾಡಿ
-> ನಿಮ್ಮ ಮನೆ ಹಾಗು ಸುತ್ತ ಮುತ್ತಲಿನ ವಾತವರಣವನ್ನು ಶುಬ್ರವಾಗಿಟ್ಟುಕೊಳ್ಳಿ , ಎಲ್ಲಿಯೂ ಚರಂಡಿಯ ನೀರು ನಿಲ್ಲದಂತೆ,ಸೊಳ್ಳೆ-ಕ್ರಿಮಿ-ಕೀಟಗಳು ಗೂಡು ಕಟ್ಟದಂತೆ ನೋಡಿಕೊಳ್ಳಿ
-> ಸೂರ್ಯಾನ ಬೆಳಕು ಗಾಳಿ ಚೆನ್ನಾಗಿ ಬರುವಂತೆ ನೋಡಿಕೊಳ್ಳಿ
-> ನೀರನ್ನು ಕುದಿಸಿ ಕುಡಿಯಿರಿ, ಪೌಸ್ಠಿಕ ಆಹಾರ, ಕುದಿಸಿದ ಗಂಜಿ-ಪಾನೀಯಗಳನ್ನು ಯತೇಚ್ಚವಾಗಿ ಸೇವಿಸಿರಿ, ಸಾಕಷ್ಟು ವಿಶ್ರಾಂತಿ, ಪಡೆಯಿರಿ, ನಿದ್ರೆ ಮಾಡಿ.
-> ರೋಗಿಗಳೊಡನೆ , ಜನಸಂದಣಿಯೊಡನೆ ಓಡಾಡುವಾಗ ಮೂಗಿಗೆ ರಕ್ಷಾ ಕವಚವನ್ನು ದರಿಸಿರಿ , ಇಲ್ಲವೆ ನಿಮ್ಮ ಅಂಗವಸ್ಟ್ರವನ್ನು ನಾಲ್ಕು ಪದರು ಮಡಚಿ ಮೂಗು ಬಾಯಿಗೆ ಅಡ್ಡವಾಗಿ ಹಿಡಿಡುಕೊಳ್ಳಿ

ನನಗೆ ರೋಗ ಇದೆಯೆಂದು ಖಚಿತ ಪಡಿಸಿಗೊಳ್ಳುವುದು ಹೇಗೆ?
ಈಗಾಗಲೆ ಮೇಲೆ ತಿಳಿಸಿರುವಂತೆ, ರೋಗ ಲಕ್ಷಣಗಳು ಕಂಡು ಬಂದರೆ ಕೂಡಲೇ ನಿಮ್ಮ ಮನೆ ಪಕ್ಕದ ಚಿಕಿತ್ಸಾಕೇಂದ್ರಕ್ಕೆ ಹೋಗಿ, ವೈದ್ಯರಿಂದ ಸೂಕ್ತ ಚಿಕಿತ್ಸೆ ಪಡೆಯಬೇಕು. ವೈದ್ಯರು ತಪಸನೆ ಮಾಡಿ, ರೋಗ ಇದೆಯೋ/ಇಲ್ಲವೋ ಎಂದು ಪತ್ತೆ ಹಚ್ಚಿ, ಸೂಕ್ತ ಚಿಕಿತ್ಸೆ ಕೊಡುತ್ತಾರೆ.

ರೋಗ ಇರೋದು ಖಚಿತವಾಗಿದೆ. ಮುಂದೇನು?
ರೋಗ ಲಕ್ಷಣ ಕಂಡು ಬಂದಲ್ಲಿ ಅಥವ ರೋಗ ಇರೋದು ಖಚಿತವಾದಲ್ಲಿ, ಮಾಸ್ಕ್ ಧರಿಸಿ ಇತರರಿಗೆ ಹರಡದಂತೆ ಜಾಗ್ರತೆ ವಹಿಸಿ ಕೂಡಲೇ ಅಸ್ಪತ್ರೆಗೆ ದಾಖಲಾಗಿ. ಪ್ರಾರಂಭದಲ್ಲೇ ಸೂಕ್ತ ಚಿಕಿತ್ಸೆ ಪಡೆದರೆ ಬೇಗ ಗುಣಮುಖರಾಗಬಹುದು.

ಮಾಸ್ಕ್ ಉಪಯೋಗಿಸೋದು ಎಷ್ಟು ಪರಿಣಾಮಕಾರಿ?
ಮಾಸ್ಕ್ ಬಗ್ಗೆ ಈ ಕೆಳಗಿನ ಅಂಶಗಳನ್ನು ತಿಳಿದುಕೊಳ್ಳಿ...
-> N95 ಮಾದರಿಯ ಮಾಸ್ಕ್ ಉತ್ತಮವಾದದ್ದು ,6-8 ಗಂಟೆಗಳ ಕಾಲ ಮಾತ್ರ ರಕ್ಷಣೆ ನೀಡಬಲ್ಲದು.ಅದ್ದರಿಂದ ಒಮ್ಮೆ ಬಳಸಿದ ಮಸ್ಕ್ ಮತ್ತೆ ಬಳಸಬೇಡಿ.
-> ಮೂಗು, ಬಾಯಿ ಮುಚ್ಚುವ ಹಾಗೆ ಸರಿಯಾಗಿ ಮಾಸ್ಕ್ ಧರಿಸಿ. ಧರಿಸಿದ ಮಾಸ್ಕ್ ಅನ್ನು ಪದೇ ಪದೇ ಮುಟ್ಟಬೇಡಿ.
-> ಒಂದೇ ಸಲ ಉಪಯೋಗಿಸಿ ಬಿಸಾಡುವ ಮಾಸ್ಕ್ ನೀವು ಉಪಯೊಗಿಸುತ್ತಿದ್ದರೆ, ದಯವಿಟ್ಟು ಎರಡನೇ ಸಲ ಉಪಯೋಗಿಸಬೇಡಿ, ಪ್ರತಿ ಉಪಯೋಗದ ನಂತರ ಕಸದ ಬುಟ್ಟಿಯಲ್ಲಿ ಬಿಸಾಡಿ.
-> ಮುಖದಲ್ಲಿರುವ ಮಾಸ್ಕ್ ಅನ್ನು ತೆಗೆದ ನಂತರ ಕೈಯನ್ನು ಸೊಪ್ ನೀರಿಂದ ತೊಳೆಯಿರಿ.
->N95 ಮಾದರಿಯ ಮಾಸ್ಕ್ ದೊರೆಯದ ಸಂದರ್ಬದಲ್ಲಿ ನಿಮ್ಮ ಅಂಗ ವಸ್ತ್ರವನ್ನೆ(ಕರ್ಚಿಫ್) ನಾಲ್ಕು ಪದರುಗಳನ್ನಾಗಿ ಮಡಚಿ ಮೂಗು-ಬಾಯಿಗೆ ಅಡ್ಡವಾಗಿ ಕಟ್ಟಿಕೊಳ್ಳಿ.ಜನ ಸಂದಣಿಯಲ್ಲಿ ,ಬಸ್ ಸ್ಟಾಂಡ್,ರೈಲು ನಿಲ್ದಾಣ,ಇನ್ನಿತರೆ ಜನ ಸಮೂಹವಿರುವ ಸ್ಥಳಗಳಲ್ಲಿ ತಪ್ಪದೆ ಬಳಸಿ
->ಮಾಸ್ಕ್ ಬದಲು ಕರ್ಚಿಫ್ ಬಳಸಿದ್ದಲ್ಲಿ, ಮನೆಗೆ ಬಂದಾಕ್ಷಣ ಅದನ್ನು ಕುದಿಯುವ ಬಿಸಿನೀರಿನಲ್ಲಿ ಹಾಕಿ ಸೋಪಿನಿಂದ ಚೆನ್ನಗಿ ತೊಳೆಯಿರಿ.

ಚಿಕಿತ್ಸೆ ಹೇಗೆ? ಎಲ್ಲಿ ಸಿಗುತ್ತದೆ?
ಸದ್ಯಕ್ಕೆ ಈ ರೋಗಕ್ಕೆ ಯಾವುದೇ ಲಸಿಕೆ ದೊರೆಯುವುದಿಲ್ಲ. ಆದರೆ ಸೂಕ್ತ ಚಿಕಿತ್ಸಾ ಕ್ರಮದಿಂದ ಈ ರೋಗದಿಂದ ಸಂಪೂರ್ಣವಾಗಿ ಗುಣಮುಖವಾಗಬಹುದು. ರಾಜ್ಯದ ಎಲ್ಲಾ ಜಿಲ್ಲಾ ಸರ್ಕಾರಿ ಆರೊಗ್ಯ ಕೇಂದ್ರಗಳಲ್ಲಿ ಉಚಿತವಾಗಿ ಮಾತ್ರೆಗಳು(tamiflu ಮಾತ್ರೆಗಳು) ದೊರೆಯುತ್ತದೆ. ಇದನ್ನು ವೈದ್ಯರ ಸಲಹೆ ಪಡೆದು ಸೇವಿಸಬೇಕು. ಬೆಂಗಳೂರಲ್ಲಿ ಸುಮಾರು 52 ಆಸ್ಪತ್ರೆಗಳಲ್ಲಿ ಈ ರೋಗಕ್ಕೆ ಚಿಕಿತ್ಸೆ ಕೊಡಲಾಗುತ್ತಿದೆ. ಹೆಚ್ಚಿನ ಮಾಹಿತಿಗಾಗಿ 1056 ಸಂಖ್ಯೆಗೆ (toll free) ಕರೆ ಮಾಡಿ.

ನಿಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ನೈಸರ್ಗಿಕವಾಗಿ ಹೆಚ್ಚಿಸುವುದು ಹೇಗೆ?
ಆಯುರ್ವೇದ ಔಷಧಿಯನ್ನು ಮನೆಯಲ್ಲೆ ತಯಾರಿಸಿ ದಿನವೂ ಉಪಯೋಗಿಸುವುದರಿಂದ ರೋಗ ನಿರೋಧಕ ಶಕ್ತಿಯನ್ನು ವ್ರುದ್ದಿಸಿಕೊಳ್ಳಬಹುದು. ಈ ಔಷಧಿಯು H1N1, ಡೆಂಗ್ಯು, ಮಲೇರಿಯಾ, ಸಾಮಾನ್ಯ ಶೀತ/ಜ್ವರ ವೈರಸ್ ಗಳ ವಿರುದ್ದ ದೇಹದ ರಕ್ತ ಕಣಗಳು ಹೋರಾಡಲು ಪರಿಣಾಮಕಾರಿಯಾಗಬಲ್ಲದು.
ಈ ಕೆಳಗೆ ಸೂಚಿಸಿರುವ ಮನೆಮದ್ದನ್ನು ದಿನವೂ ಉಪಯೋಗಿಸಿ...
ಹಸಿ ಶುಂಠಿಯನ್ನು (25 ಗ್ರಾಮ್) ನೀರಲ್ಲಿ ಸ್ವಚ್ಚವಾಗಿ ತೊಳೆದು, ರೆಡಿ ಮಾಡಿರಿ. ನಂತರ 5 ಎಸಳು ಬೆಳ್ಳುಳ್ಳಿ, 2 ಚಿಟಿಕೆಯಸ್ಟು ಜೀರಿಗೆ, 2 ಕಾಳುಮೆಣಸು, ಅಮೃತಬಳ್ಳಿ, ತಲಾ 5 ಎಸಳು ತುಳಸಿ, ರೆಡಿ ಮಾಡಿರಿ. ಈ ಎಲ್ಲವನ್ನು ಪೇಸ್ಟ್ ತರ ಆಗುವ ತನಕ ಚೆನ್ನಾಗಿ ರುಬ್ಬಿರಿ. ಒಂದು ಪಾತ್ರೆಯಲ್ಲಿ 5-6 ಗ್ಲಾಸ್ ನೀರನ್ನು ತೆಗೆದುಕೊಂದು, ತಯಾರಿಸಿದ ಪೇಸ್ಟನ್ನು ಮಿಶ್ರ ಮಾಡಿ ಚೆನ್ನಾಗಿ ಕುದಿಸಿ. (ಜಾಸ್ತಿ ಕುದಿಸಿದಸ್ಟು ಉತ್ತಮ). ತಣ್ಣಾಗಾದ ನಂತರ ಒಂದು ಗ್ಲಾಸ್ ಕಷಾಯವನ್ನು ಕುಡಿಯಿರಿ.

ಸೂಚನೆ:
1. ಒಂದು ವರ್ಷಕ್ಕಿಂತ ಸಣ್ಣ ಮಕ್ಕಳಿಗೆ ಕೊಡಬೇಡಿ.
2. 4 ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ 2-3 ಟೀ ಚಮಚದಸ್ಟು ಮಾತ್ರ ಕೊಡಿ.

ಇದರೊಂದಿಗೆ ಪ್ರತಿನಿತ್ಯ ನಿಯಮಿತ ವ್ಯಾಯಾಮ; ಹಾಲು, ಮೊಟ್ಟೆ, ಬಾಳೆಹಣ್ಣು, ಇತ್ಯಾದಿ ವಿಟಮಿನ್ ಯುಕ್ತ ಪೌಸ್ಟಿಕ ಆಹಾರವನ್ನು ಸೇವಿಸಿ.

ಸ್ನೇಹಿತರೆ,
ಈ ತೆರನಾದ ರೋಗಗಳು ದಿನೇದಿನೆ ಹೆಚ್ಚುತ್ತಿವೆ ..
ಇದನ್ನು ನಿಯಂತ್ರಿಸಲು, ತಡೆಗಟ್ಟಲು ವೈದ್ಯರು, ತಂತ್ರಗ್ನರು ವಿಜ್ನಾನಿಗಳು ನಿರಂತರ ಪ್ರಯತ್ನಿಸುತಿದ್ದಾರೆ ನೀವು ಸಹಕರಿಸಿ, ಸಾದ್ಯವಾದರೆ ಈ ಪ್ರತಿಯನ್ನು ನಕಲು ಮಾಡಿಸಿ ಎಲ್ಲರಿಗು ಹಂಚಿ.

ದಯವಿಟ್ಟು ಈ ಲೇಖನವನ್ನು ಎಲ್ಲರೊಂದಿಗೆ ಹಂಚಿಕೊಳ್ಳಿ...
ಈ ಲೇಖನವು "ಗಗನ ಇಂಡಿಯಾ ಫ್ರೇಂಡ್ಸ್ ಗ್ರೂಪ್" ನಿಂದ ಪ್ರಕಟಣೆಗೊಂಡಿರುತ್ತದೆ.
Visit our website: www.gaganaindia.com

5 comments:

  1. Good coverage on Swine flu. Though I din't have much patience to read enough it looked good. You could have mentioned swine flu as "Handi Jvara" which would have been more appropriate .. Nevertheless I appreciate your effort in writing something in Kannada. keep writing :)

    ReplyDelete
  2. In between you can read my blog http://praveenrajesh.blogspot.com/

    I have lost the habit of updating it :(

    You are welcome to read my other blog on spiritual stuff http://jesusthelionofjudah.blogspot.com/

    ReplyDelete
  3. Yeah, u r right, "Handi Jvara" makes much sense...

    ReplyDelete
  4. Congratulations lokesh for effort you have put for writing a blog in kannada...

    I have a found problem though..
    I created a new login a visited your blog... all the kannada characters were looking garbled...

    I could view the content of your blog in another login, where I had installed font...

    You can put a comment somewhere in your blog saying how to install kannada font.

    ReplyDelete
  5. I have created a few blogs...

    Repository of Funstuff
    http://funmaterials.blogspot.com

    My everyday experiences
    http://manogatha.blogspot.com

    Saw something good about a org practices ... wrote here
    http://orgexcellence.blogspot.com

    Best speeches are recorded here
    http://speechgems.blogspot.com

    ReplyDelete