Friday, December 31, 2010

Happy New Year

Dear All

Happy new year to all my cute friends...

Regards
Lokesh

Tuesday, August 18, 2009

H1N1 (ಸ್ವಯಿನ್ ಪ್ಲೂ) - ತಡೆಗಟ್ಟೊದು ಹೇಗೆ?

ಏನಿದು ಎಚ್1ಎನ್1?
ಎಚ್1ಎನ್1 ಎಂಬುದು ಒಂದು ವೈರಸ್ ರೋಗಾಣು, ಇದರಿಂದ ಹರಡುವ ರೋಗ ಲಕ್ಷಣಗಳ ಸಮೂಹವೇ ಸ್ವಯನ್ ಪ್ಲೂ , ಸಾಮಾನ್ಯ ಶೀತದಂತೆ ಪ್ರಾರಂಭವಾಗುವಾಗುವ ಈ ರೋಗ ಸಾಂಕ್ರಾಮಿಕವಾಗಿ ಕ್ರಮೇಣ ನೀರು,ಗಾಳಿ,ಆಹಾರ, ಸೋಂಕಿತ ವ್ಯಕ್ತಿಯ ಸ್ಪರ್ಶ,ಹಾಗು ಇನ್ನಿತರ ಮಾದ್ಯಮಗಳ ಮೂಲಕ ಇತರರಿಗೂ ಹರಡುತ್ತದೆ..ಪ್ರಾರಂಭದಲ್ಲೆ ಗುರುತಿಸಿ ಸೂಕ್ತ ಚಿಕಿತ್ಸೆ ಕೊಡಿಸಿದರೆ ಅಪಾಯದಿಂದ ಪಾರಾಗಬಹುದು ಕೈ ಮೀರಿದರೆ ತೀವ್ರ ಉಸಿರಾಟದ ತೊಂದರೆ , ಹಾಗು ಇತರೆ ಅನಾರೋಗ್ಯ ಲಕ್ಷಣಗಳಿಂದ ರೋಗಿ ಸಾವನ್ನಪ್ಪುವ ಸಂಭವವಿದೆ.

ಈ ರೋಗದ ಲಕ್ಷಣ ಗಳೇನು?
ಸಾಮಾನ್ಯ ನೆಗಡಿ-ಶೀತ,ತಲೆ-ಬಾರ,ತಲೆ-ನೋವು, ಕೆಮ್ಮು-ಕಫ, ಗಂಟಲು-ಕೆರೆತ,
ಜ್ವರ-ಚಳಿ, ದೇಹದ ಅಂಗಾಂಗಗಳಲ್ಲಿ ನೋವು, ಸುಸ್ತು ಇವು ಪ್ರಾರಂಭಿಕ ಹಂತದ ರೋಗ ಲಕ್ಷಣಗಳು. ಈ ಲಕ್ಷಣಗಳ ಜೊತೆಗೆ ಒಂದೆರೆಡು ದಿನಗಳಲ್ಲಿ ಕ್ರಮೇಣ ಈ ಕೆಳಕಂಡ ರೋಗಚಿಹ್ನೆ ಗಳು ಉಲ್ಬಣಿಸಿದರೆ ಕೂಡಲೆ ಸಮೀಪದ ಆರೋಗ್ಯ ಕೇಂದ್ರ ದ ವೈದ್ಯರನ್ನು ಸಂಪರ್ಕಿಸಿ,
ಮಕ್ಕಳಲ್ಲಿ ರೋಗಚಿಹ್ನೆಗಳು
-> ವೇಗದ ಉಸಿರಾಟ ಮತ್ತು ಉಸಿರಾಟದಲ್ಲಿ ತೊಂದರೆ
-> ಚರ್ಮ ಕಪ್ಪು ಅಥವ ನೀಲಿ ಬಣ್ಣ ಕ್ಕೆ ತಿರುಗುವುದು
-> ದ್ರವ ರೂಪದ ಆಹಾರ ಪದಾರ್ಥಗಳನ್ನು ತಿನ್ನಲು ನಿರಾಕರಿಸುವುದು
-> ಪದೇ-ಪದೇ ವಿಪರೀತ ವಾಂತಿಯಾಗುದು
-> ಯಾರ ಜೊತೆ ಬೆರೆಯದೆ,ಮಾತನಾಡದೆ ಒಂಟಿಯಾಗಿರುವುದು
-> ಕೆಲವೊಮ್ಮೆ ಹಿಡಿಯಲಾರದಷ್ಟು ಅಳು-ಕಿರುಚಾಟ-ಕಿರಿಕಿರಿ
-> ವಿಪರೀತ ಶೀತ, ಕೆಮ್ಮು-ಕಫ, ಜ್ವರ

ವಯಸ್ಕರಲ್ಲಿ ರೋಗಚಿಹ್ನೆಗಳು
-> ತೀವ್ರ ಉಸಿರಾಟದ ತೊಂದರೆ
-> ಎದೆಯಲ್ಲಿ ,ಹೊಟ್ಟೆಯಲ್ಲಿ ವಿಪರೀತ ನೋವು ಹಾಗು ಒತ್ತಡ
-> ತಲೆ-ನೋವು, ಜ್ವರ , ತಲೆತಿರುಗುವಿಕೆ, ತಲೆಭಾರ
-> ಮನಸಲ್ಲಿ ಉದ್ವೇಗ, ಆತಂಕ, ಗಾಬರಿ, ಚಂಚಲತೆ,ಗೊಂದಲ,ದಿಗಿಲು
-> ಪದೇ-ಪದೇ ವಿಪರೀತ ವಾಂತಿಯಾಗುದು
-> ವಿಪರೀತ ಶೀತ, ಕೆಮ್ಮು-ಕಫ, ಜ್ವರ
ಈ ರೋಗಚಿಹ್ನೆ ಗಳು ಉಲ್ಬಣಿಸಿದರೆ ಕೂಡಲೆ ಸಮೀಪದ ಆರೋಗ್ಯ ಕೇಂದ್ರ ದ ವೈದ್ಯರನ್ನು ಸಂಪರ್ಕಿಸಿ,

ಇದರಿಂದ ರಕ್ಷಿಸಿಕೊಳ್ಳುವುದು ಹೇಗೆ?
ಪ್ರಾರಂಬಿಕ ಹಂತದಲ್ಲಿ ಸೂಕ್ತ ಚಿಕಿತ್ಸೆಯನ್ನು ನೀಡಿದರೆ ಹಾಗು ಈ ಕೆಳಗಿನ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಿದರೆ ಖಂಡಿತ ಈ ರೋಗವನ್ನು ತಡೆಗಟ್ಟಬಹುದು
-> ಜನಸಂದಣಿಯಲ್ಲಿ ,ಗುಂಪಿನ ಜೊತೆ ಬೆರೆಯಬೇಡಿ ಗುಂಪಿನಲ್ಲಿ ಯಾರಿಗಾದರು ಒಬ್ಬರಿಗಿದ್ದರೆ ಎಲ್ಲರಿಗು ಹರಡುತ್ತದೆ
-> ಈ ರೋಗಾಣು 2 ರಿಂದ 8 ಗಂಟೆಗಳ ತನಕ ಹರಡಿದ ಯಾವುದೇ ವಸ್ತುಗಳ ಮೇಲೆ ವಾತಾವರಣದಲ್ಲಿ ಬದುಕಿರಬಲ್ಲದು ಆದ್ದರಿಂದ ಸೋಂಕಿತ ವ್ಯಕ್ತಿಯ ಸಂಪರ್ಕದಿಂದ ದೂರವಿರಿ, ಅವರು ಬಳಸಿದ ವಸ್ತುಗಳನ್ನು ಮುಟ್ಟಬೇಡಿ. ಮನೆಗೆ ಬಂದಕ್ಷಣ ಸೋಪು, ಡೆಟಾಲ್ ನಿಂದ ಶುಭ್ರವಾಗಿ ಕೈ ಕಾಲುಗಳನ್ನು ತೊಳೆದುಕೊಳ್ಳಿ, ಸಾದ್ಯವಾದರೆ ಬಿಸಿನೀರಿನಿಂದ ಸ್ನಾನ ಮಾಡಿ
-> ನಿಮ್ಮ ಮನೆ ಹಾಗು ಸುತ್ತ ಮುತ್ತಲಿನ ವಾತವರಣವನ್ನು ಶುಬ್ರವಾಗಿಟ್ಟುಕೊಳ್ಳಿ , ಎಲ್ಲಿಯೂ ಚರಂಡಿಯ ನೀರು ನಿಲ್ಲದಂತೆ,ಸೊಳ್ಳೆ-ಕ್ರಿಮಿ-ಕೀಟಗಳು ಗೂಡು ಕಟ್ಟದಂತೆ ನೋಡಿಕೊಳ್ಳಿ
-> ಸೂರ್ಯಾನ ಬೆಳಕು ಗಾಳಿ ಚೆನ್ನಾಗಿ ಬರುವಂತೆ ನೋಡಿಕೊಳ್ಳಿ
-> ನೀರನ್ನು ಕುದಿಸಿ ಕುಡಿಯಿರಿ, ಪೌಸ್ಠಿಕ ಆಹಾರ, ಕುದಿಸಿದ ಗಂಜಿ-ಪಾನೀಯಗಳನ್ನು ಯತೇಚ್ಚವಾಗಿ ಸೇವಿಸಿರಿ, ಸಾಕಷ್ಟು ವಿಶ್ರಾಂತಿ, ಪಡೆಯಿರಿ, ನಿದ್ರೆ ಮಾಡಿ.
-> ರೋಗಿಗಳೊಡನೆ , ಜನಸಂದಣಿಯೊಡನೆ ಓಡಾಡುವಾಗ ಮೂಗಿಗೆ ರಕ್ಷಾ ಕವಚವನ್ನು ದರಿಸಿರಿ , ಇಲ್ಲವೆ ನಿಮ್ಮ ಅಂಗವಸ್ಟ್ರವನ್ನು ನಾಲ್ಕು ಪದರು ಮಡಚಿ ಮೂಗು ಬಾಯಿಗೆ ಅಡ್ಡವಾಗಿ ಹಿಡಿಡುಕೊಳ್ಳಿ

ನನಗೆ ರೋಗ ಇದೆಯೆಂದು ಖಚಿತ ಪಡಿಸಿಗೊಳ್ಳುವುದು ಹೇಗೆ?
ಈಗಾಗಲೆ ಮೇಲೆ ತಿಳಿಸಿರುವಂತೆ, ರೋಗ ಲಕ್ಷಣಗಳು ಕಂಡು ಬಂದರೆ ಕೂಡಲೇ ನಿಮ್ಮ ಮನೆ ಪಕ್ಕದ ಚಿಕಿತ್ಸಾಕೇಂದ್ರಕ್ಕೆ ಹೋಗಿ, ವೈದ್ಯರಿಂದ ಸೂಕ್ತ ಚಿಕಿತ್ಸೆ ಪಡೆಯಬೇಕು. ವೈದ್ಯರು ತಪಸನೆ ಮಾಡಿ, ರೋಗ ಇದೆಯೋ/ಇಲ್ಲವೋ ಎಂದು ಪತ್ತೆ ಹಚ್ಚಿ, ಸೂಕ್ತ ಚಿಕಿತ್ಸೆ ಕೊಡುತ್ತಾರೆ.

ರೋಗ ಇರೋದು ಖಚಿತವಾಗಿದೆ. ಮುಂದೇನು?
ರೋಗ ಲಕ್ಷಣ ಕಂಡು ಬಂದಲ್ಲಿ ಅಥವ ರೋಗ ಇರೋದು ಖಚಿತವಾದಲ್ಲಿ, ಮಾಸ್ಕ್ ಧರಿಸಿ ಇತರರಿಗೆ ಹರಡದಂತೆ ಜಾಗ್ರತೆ ವಹಿಸಿ ಕೂಡಲೇ ಅಸ್ಪತ್ರೆಗೆ ದಾಖಲಾಗಿ. ಪ್ರಾರಂಭದಲ್ಲೇ ಸೂಕ್ತ ಚಿಕಿತ್ಸೆ ಪಡೆದರೆ ಬೇಗ ಗುಣಮುಖರಾಗಬಹುದು.

ಮಾಸ್ಕ್ ಉಪಯೋಗಿಸೋದು ಎಷ್ಟು ಪರಿಣಾಮಕಾರಿ?
ಮಾಸ್ಕ್ ಬಗ್ಗೆ ಈ ಕೆಳಗಿನ ಅಂಶಗಳನ್ನು ತಿಳಿದುಕೊಳ್ಳಿ...
-> N95 ಮಾದರಿಯ ಮಾಸ್ಕ್ ಉತ್ತಮವಾದದ್ದು ,6-8 ಗಂಟೆಗಳ ಕಾಲ ಮಾತ್ರ ರಕ್ಷಣೆ ನೀಡಬಲ್ಲದು.ಅದ್ದರಿಂದ ಒಮ್ಮೆ ಬಳಸಿದ ಮಸ್ಕ್ ಮತ್ತೆ ಬಳಸಬೇಡಿ.
-> ಮೂಗು, ಬಾಯಿ ಮುಚ್ಚುವ ಹಾಗೆ ಸರಿಯಾಗಿ ಮಾಸ್ಕ್ ಧರಿಸಿ. ಧರಿಸಿದ ಮಾಸ್ಕ್ ಅನ್ನು ಪದೇ ಪದೇ ಮುಟ್ಟಬೇಡಿ.
-> ಒಂದೇ ಸಲ ಉಪಯೋಗಿಸಿ ಬಿಸಾಡುವ ಮಾಸ್ಕ್ ನೀವು ಉಪಯೊಗಿಸುತ್ತಿದ್ದರೆ, ದಯವಿಟ್ಟು ಎರಡನೇ ಸಲ ಉಪಯೋಗಿಸಬೇಡಿ, ಪ್ರತಿ ಉಪಯೋಗದ ನಂತರ ಕಸದ ಬುಟ್ಟಿಯಲ್ಲಿ ಬಿಸಾಡಿ.
-> ಮುಖದಲ್ಲಿರುವ ಮಾಸ್ಕ್ ಅನ್ನು ತೆಗೆದ ನಂತರ ಕೈಯನ್ನು ಸೊಪ್ ನೀರಿಂದ ತೊಳೆಯಿರಿ.
->N95 ಮಾದರಿಯ ಮಾಸ್ಕ್ ದೊರೆಯದ ಸಂದರ್ಬದಲ್ಲಿ ನಿಮ್ಮ ಅಂಗ ವಸ್ತ್ರವನ್ನೆ(ಕರ್ಚಿಫ್) ನಾಲ್ಕು ಪದರುಗಳನ್ನಾಗಿ ಮಡಚಿ ಮೂಗು-ಬಾಯಿಗೆ ಅಡ್ಡವಾಗಿ ಕಟ್ಟಿಕೊಳ್ಳಿ.ಜನ ಸಂದಣಿಯಲ್ಲಿ ,ಬಸ್ ಸ್ಟಾಂಡ್,ರೈಲು ನಿಲ್ದಾಣ,ಇನ್ನಿತರೆ ಜನ ಸಮೂಹವಿರುವ ಸ್ಥಳಗಳಲ್ಲಿ ತಪ್ಪದೆ ಬಳಸಿ
->ಮಾಸ್ಕ್ ಬದಲು ಕರ್ಚಿಫ್ ಬಳಸಿದ್ದಲ್ಲಿ, ಮನೆಗೆ ಬಂದಾಕ್ಷಣ ಅದನ್ನು ಕುದಿಯುವ ಬಿಸಿನೀರಿನಲ್ಲಿ ಹಾಕಿ ಸೋಪಿನಿಂದ ಚೆನ್ನಗಿ ತೊಳೆಯಿರಿ.

ಚಿಕಿತ್ಸೆ ಹೇಗೆ? ಎಲ್ಲಿ ಸಿಗುತ್ತದೆ?
ಸದ್ಯಕ್ಕೆ ಈ ರೋಗಕ್ಕೆ ಯಾವುದೇ ಲಸಿಕೆ ದೊರೆಯುವುದಿಲ್ಲ. ಆದರೆ ಸೂಕ್ತ ಚಿಕಿತ್ಸಾ ಕ್ರಮದಿಂದ ಈ ರೋಗದಿಂದ ಸಂಪೂರ್ಣವಾಗಿ ಗುಣಮುಖವಾಗಬಹುದು. ರಾಜ್ಯದ ಎಲ್ಲಾ ಜಿಲ್ಲಾ ಸರ್ಕಾರಿ ಆರೊಗ್ಯ ಕೇಂದ್ರಗಳಲ್ಲಿ ಉಚಿತವಾಗಿ ಮಾತ್ರೆಗಳು(tamiflu ಮಾತ್ರೆಗಳು) ದೊರೆಯುತ್ತದೆ. ಇದನ್ನು ವೈದ್ಯರ ಸಲಹೆ ಪಡೆದು ಸೇವಿಸಬೇಕು. ಬೆಂಗಳೂರಲ್ಲಿ ಸುಮಾರು 52 ಆಸ್ಪತ್ರೆಗಳಲ್ಲಿ ಈ ರೋಗಕ್ಕೆ ಚಿಕಿತ್ಸೆ ಕೊಡಲಾಗುತ್ತಿದೆ. ಹೆಚ್ಚಿನ ಮಾಹಿತಿಗಾಗಿ 1056 ಸಂಖ್ಯೆಗೆ (toll free) ಕರೆ ಮಾಡಿ.

ನಿಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ನೈಸರ್ಗಿಕವಾಗಿ ಹೆಚ್ಚಿಸುವುದು ಹೇಗೆ?
ಆಯುರ್ವೇದ ಔಷಧಿಯನ್ನು ಮನೆಯಲ್ಲೆ ತಯಾರಿಸಿ ದಿನವೂ ಉಪಯೋಗಿಸುವುದರಿಂದ ರೋಗ ನಿರೋಧಕ ಶಕ್ತಿಯನ್ನು ವ್ರುದ್ದಿಸಿಕೊಳ್ಳಬಹುದು. ಈ ಔಷಧಿಯು H1N1, ಡೆಂಗ್ಯು, ಮಲೇರಿಯಾ, ಸಾಮಾನ್ಯ ಶೀತ/ಜ್ವರ ವೈರಸ್ ಗಳ ವಿರುದ್ದ ದೇಹದ ರಕ್ತ ಕಣಗಳು ಹೋರಾಡಲು ಪರಿಣಾಮಕಾರಿಯಾಗಬಲ್ಲದು.
ಈ ಕೆಳಗೆ ಸೂಚಿಸಿರುವ ಮನೆಮದ್ದನ್ನು ದಿನವೂ ಉಪಯೋಗಿಸಿ...
ಹಸಿ ಶುಂಠಿಯನ್ನು (25 ಗ್ರಾಮ್) ನೀರಲ್ಲಿ ಸ್ವಚ್ಚವಾಗಿ ತೊಳೆದು, ರೆಡಿ ಮಾಡಿರಿ. ನಂತರ 5 ಎಸಳು ಬೆಳ್ಳುಳ್ಳಿ, 2 ಚಿಟಿಕೆಯಸ್ಟು ಜೀರಿಗೆ, 2 ಕಾಳುಮೆಣಸು, ಅಮೃತಬಳ್ಳಿ, ತಲಾ 5 ಎಸಳು ತುಳಸಿ, ರೆಡಿ ಮಾಡಿರಿ. ಈ ಎಲ್ಲವನ್ನು ಪೇಸ್ಟ್ ತರ ಆಗುವ ತನಕ ಚೆನ್ನಾಗಿ ರುಬ್ಬಿರಿ. ಒಂದು ಪಾತ್ರೆಯಲ್ಲಿ 5-6 ಗ್ಲಾಸ್ ನೀರನ್ನು ತೆಗೆದುಕೊಂದು, ತಯಾರಿಸಿದ ಪೇಸ್ಟನ್ನು ಮಿಶ್ರ ಮಾಡಿ ಚೆನ್ನಾಗಿ ಕುದಿಸಿ. (ಜಾಸ್ತಿ ಕುದಿಸಿದಸ್ಟು ಉತ್ತಮ). ತಣ್ಣಾಗಾದ ನಂತರ ಒಂದು ಗ್ಲಾಸ್ ಕಷಾಯವನ್ನು ಕುಡಿಯಿರಿ.

ಸೂಚನೆ:
1. ಒಂದು ವರ್ಷಕ್ಕಿಂತ ಸಣ್ಣ ಮಕ್ಕಳಿಗೆ ಕೊಡಬೇಡಿ.
2. 4 ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ 2-3 ಟೀ ಚಮಚದಸ್ಟು ಮಾತ್ರ ಕೊಡಿ.

ಇದರೊಂದಿಗೆ ಪ್ರತಿನಿತ್ಯ ನಿಯಮಿತ ವ್ಯಾಯಾಮ; ಹಾಲು, ಮೊಟ್ಟೆ, ಬಾಳೆಹಣ್ಣು, ಇತ್ಯಾದಿ ವಿಟಮಿನ್ ಯುಕ್ತ ಪೌಸ್ಟಿಕ ಆಹಾರವನ್ನು ಸೇವಿಸಿ.

ಸ್ನೇಹಿತರೆ,
ಈ ತೆರನಾದ ರೋಗಗಳು ದಿನೇದಿನೆ ಹೆಚ್ಚುತ್ತಿವೆ ..
ಇದನ್ನು ನಿಯಂತ್ರಿಸಲು, ತಡೆಗಟ್ಟಲು ವೈದ್ಯರು, ತಂತ್ರಗ್ನರು ವಿಜ್ನಾನಿಗಳು ನಿರಂತರ ಪ್ರಯತ್ನಿಸುತಿದ್ದಾರೆ ನೀವು ಸಹಕರಿಸಿ, ಸಾದ್ಯವಾದರೆ ಈ ಪ್ರತಿಯನ್ನು ನಕಲು ಮಾಡಿಸಿ ಎಲ್ಲರಿಗು ಹಂಚಿ.

ದಯವಿಟ್ಟು ಈ ಲೇಖನವನ್ನು ಎಲ್ಲರೊಂದಿಗೆ ಹಂಚಿಕೊಳ್ಳಿ...
ಈ ಲೇಖನವು "ಗಗನ ಇಂಡಿಯಾ ಫ್ರೇಂಡ್ಸ್ ಗ್ರೂಪ್" ನಿಂದ ಪ್ರಕಟಣೆಗೊಂಡಿರುತ್ತದೆ.
Visit our website: www.gaganaindia.com

Sunday, August 16, 2009

Baba Ramdev's ayurvedic medicine for Swine Flu H1N1

Here I have given the details on what Ramdev tells about Swine flu.

The Yoga Guru said doing ''Pranayam'' regularly will make the heart strong that can prevent the virus from entering the human body. '' The virus will have the least effect on people who had strong heart, liver and blood,'' Baba Ramdev said.





Kindly forward this message to all...
Source: http://atmabodh.net/ramdev_ayurvedic_medicine_for_swine_flu

Tuesday, August 11, 2009

ಚಂಚಲೆ

ಇದು ನನ್ನಾಕೆಗೆ ನಾನಿಟ್ಟ ಪ್ರೀತಿಯ(?) ಹೆಸರು.ಅದೂ ಪರಿಚಯದ 2 ತಿಂಗಳಲ್ಲೇ. ಕಾರಣವೇನೆಂದು ಕೇಳೊ/ಹೇಳೊ ಅಗತ್ಯವಿಲ್ಲ ಈಗಿನ ಕಾಲದವರಿಗೆ ಬಿಡಿ. ಆದರೂ ಕೆಳವನ್ನು ಮಾತ್ರ ನನ್ನಾಕೆಗೆ ತಿಳಿಯದಂತೆ ನಿಮ್ಮೊಂದಿಗೆ ಹಂಚಿ ಕೊಳ್ತೇನೆ...
ಅವಳಿಗೆ SMS ಅಂದ್ರೆ ಪ್ರಾಣ...(ಕೆಲವು ಸಲ ಮೊಬೈಲ್ ಬಿಲ್ಲ್ ಜಾರೋದು ನನ್ನ ಕೈಯಿಂದ ತಾನೇ) ಪರವಾಗಿಲ್ಲ ಬಿಡಿ ಅಂತಿರಾ...ಅಂ ಅವಳ SMS ನಿಂದಾಗಿ ನಾನು ರಾತ್ರಿಯಿಡಿ ಜಾಗರಣೆ ಮಾಡಬೇಕಾಗುತ್ತದೆ...ಇದೊಂಥರಾ 'ಬೆಕ್ಕಿಗೆ ಆಟ, ಇಲಿಗೆ ಪ್ರಾಣ ಸಂಕಟ' ಅಂದಂತೆ; '12 ಗಂಟೆ ರಾತ್ರಿ - reply ಮಾಡದಿದ್ರೆ ಮಂಗಳಾರತಿ'- ಅಷ್ಟೆ ಅಲ್ಲ - ಮರುದಿವಸ ನೋಡೊಕಾಗೊಲ್ಲ ಅವಳ ಕೆಂಪು ಮೂತಿ(ಕೋಪದಲ್ಲಿ)...ಕೇಳೊರಿಲ್ಲ ನನ್ನ ಕೆಂಪು ಕಣ್ಣಾ ಕಾಂತಿ (ನಿದ್ದೆಯಿಲ್ಲದೆ!)...
ಅವಳ ಇನ್ನೊಂದು ಹಟ ಅಂದರೆ... ಅವಳಿಗೆ ವಿಪರೀತ ಹೊಟೆಲ್ ಊಟದ ಹುಚ್ಚು(ಅನ್ನಬಹುದೇನೋ). ನನಗಿಷ್ಟವಿಲ್ಲದಿದ್ದರೂ ಹೋಗಲೇಬೇಕು... ಇಷ್ಟವಿಲ್ಲದಿದ್ದರೂ ತಿನ್ನಲೇಬೇಕು... ಕಷ್ಟಪಟ್ಟು ಬಿಲ್ಲು ಕೊಡಲೇಬೇಕು...!! ಅಬ್ಬಬ್ಬ..ಹೊಟೆಲ್ ಊಟ - ಸಿನಿಮಾ ನೋಟ...ತಿಂಗಳ ಕೊನೆಗೆ ಈ ಬಡಪಾಯಿ ಪರದಾಟ...”ಬಲ್ಲವರಿಗೇ ಗೊತ್ತು ಬಂಗಾರದ ಮೌಲ್ಯ!!” ಅಲ್ಲವೇ (ಈಕೆಗಾಗಿಯೆ ನಾ ready ಮಾಡಿದ ಹೊಸ ಗಾದೆ...ಬಂಗಾರದ ಬಗ್ಗೆ ನಿಮ್ಮವರು ಅಪ್ಪಿ ತಪ್ಪಿ ಮಾತಾಡಿದರೆ ಉಪಯೋಗಿಸಿ)
ಇವಳ ಕೋಪ/ಹಟವನ್ನು ವರ್ಣಿಸಲಸಾದ್ಯ... (ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದೆನೆ.ಓದಿ)
"Forum Garuda ಮಾಲ್
ಕರಕೊಂಡು ಹೋಗದಿದ್ರೆ ಹಾಲಹಾಲ್...
ಕೆಪೆ coffee ಡೇ... McDonald ವೆಜ್ಜಿ
ಕೊಡದಿದ್ರೆ ಅವಳಾಗುವಳು ಮಿರ್ಚಿ ಬಜ್ಜಿ..."

ಇಷ್ಟೆಲ್ಲ ಅವಳ ಬಗ್ಗೆ ನಿಮ್ಮೊಂದಿಗೆ(ಮೊದಲೇ ಹೇಳಿದಂತೆ, ಅವಳಿಗೆ ಗೊತ್ತಿಲ್ಲದೆ) ಹೇಳಿದ್ದೇನೆ…ಕೊನೆಯದಾಗಿ ನಾನು ಅವಳನ್ನು ನಗಿಸಲು/ಕೋಪಿಸಲು/ಪೀಡಿಸಲು/ಸಮಧಾನಿಸಲು ಅವಳ ಮುಂದೆ ಗುನುಗುನಿಸುವ ಒಂದು ಹಾಡು...
“ನೀನು ನನ್ನ ಚಂಚು
ತಲೆ ತಿಂತಿಯ ಇಂಚು ಇಂಚು
ಮಾಡ್ತಿಯಾ ಭಲೇ ಸಂಚು
ಸುಮ್ಮನಿದ್ರೆ ಕೊಡ್ತಿಯ ಪಂchu”

Sunday, August 9, 2009

ಕಾಲ

ಆತ ಐದಂಕಿ ಸಂಬಳ ಎಣಿಸುವ ಸಾಪ್ಟವೇರ್ ಇಂಜಿನಿಯರ್. ಆತನ ತಂದೆಯೋ ಮಗನ ವರ್ಷದ ಸಂಬಳವನ್ನು ಕೂಡ ತನ್ನ ಜೀವನದ ವರಮಾನದಲ್ಲಿ ಎಣಿಸಿಲ್ಲ, ಈಗ ತಂದೆಗೆ ಪ್ರಾಯವಾಗಿದೆ, ರಿಟೈರ್ ಆಗಿ ಮನೆಯಲ್ಲಿದಾರೆ. ತಿಂಗಳ ಔಷಧಿ ಖರ್ಚು ಮಗ ಭರಿಸುವಂತಾಗಿದೆ. ಮಗ ತಂದೆಗಾಗಿ ಐನೂರು ರುಪಾಯೀ ಖರ್ಚು ಮಾಡಲು ಐದು ಸಲ ಆಲೋಚಿಸುವ ಮಟ್ಟಕ್ಕಿಳಿದಿದ್ದಾನೆ.
***
ಕಾಲ ಉರುಳುತಿದೆ… ಆರು ವರುಷದ ಮಗನಿದ್ದಾನೆ. ಈತ ಮಗನ ಭವಿಷ್ಯತ್ತಿಗೆ ಹತ್ತಾರು ಯೋಜನೆಗಳನ್ನು ಹಾಕಿಕೊಂಡಿದ್ದಾನೆ, ಈತನ ತಂದೆಯೂ ಇದೇ ಯೋಜನೆಯನ್ನು ಮೂವತ್ತು ವರ್ಷಗಳ ಹಿಂದೆ, ಹಾಕಿಕೊಂಡಿದ್ದರು. ವ್ಯತ್ಯಾಸ ಮಾತ್ರ ಖರ್ಚಿನ ಅಂಕಿ ಅಂಶಗಳಲ್ಲಷ್ಟೆ, ಉಳಿದೆಲ್ಲವು ಒಂದೇ.
***
ಅಂದು ಅತನಿಗೆ ಜ್ವರ. ನಾಲ್ಕು ಸಲ ಡಾಕ್ಟರ್ ಬಂದು ಹೋಗಿದ್ದಾರೆ. ದಿನಕ್ಕೆ ಸಾವಿರಾರು ರೂಪಯಿಗಳನ್ನು ಖರ್ಚು ಮಾಡಿದ್ದಾನೆ. ರಜೆ ಹಾಕಿ ಮನೆಯಲ್ಲಿ ಮಲಗಿದ್ದಾನೆ. ಪಕ್ಕದಲ್ಲಿ ಹೆಂಡತಿ ಸೇವೆಗೆ ಸದಾ ಆಣಿಯಾಗಿದ್ದಾಳೆ. ಹೆಂಡತಿ ಪಕ್ಕ ನಗುತ್ತ ಕೂತಿರೊ ಮಗನ ಮುಖವನ್ನು ಸೂಕ್ಮ ವಾಗಿ ನೋಡುತ್ತಿದ್ದಾನೆ..ಅದೇಕೊ ಮಗ ತನ್ನನ್ನು ನೋಡಿ ಅಣಕವಾಡುತಿದ್ದಾನೆ ಅನಿಸುತಿದೆ... ಮನಸ್ಸು ಭಾರವಾಗುತ್ತಿದೆ... ಎದುರಿಗಿರೊ ರೂಮಿನಲ್ಲಿ ತಂದೆ ಮಲಗಿದ್ದಾರೆ. ಕಿಟಕಿಯಾಚೆಗಿನ ವಿಶಾಲ ಆಕಾಶವನ್ನು ದಿಟ್ಟಿಸಿ ನೋಡುತ್ತಿದ್ದಾರೆ…
***
ಗಡಿಯಾರ ಓಡುತಿದೆ..ಆದರೆ ಅದೇ ಶಬ್ದ..ಟಿಕ್ ಟಿಕ್ ಟಿಕ್...
***

Saturday, August 8, 2009

ಪೀP ಪಾರಾಯಣ

ಅರೆರೇ ಇವ ಯಾವ ಸಿನಿಮಾಗೆ ಸಂಗೀತ ಸಮ್ಯೋಜನೆ ಮಾಡಲು ಹೊರಟಿದ್ದಾನೆ ಅಂದುಕೊಂಡಿರಾ.. ಅಂ ನಾ ಹೇಳ್ತಿರೊದು ಪ್ರೀತಿಯ ಲೊಕದಲ್ಲಿರೊ ಪ್ರಣಯಿಗಳ ಬಗ್ಗೆ... ಅವರು ಉಪಯೋಗಿಸುವ ಪೀಪಿಯ ಬಗ್ಗೆ... ಇದ್ಯಾವ ಸೀಮೆ ಪ್ರಣಯ ಪಕ್ಶಿಗಳು ಪೀಪೀ ಊದುವವರು, ಅದೂ ಈ ಹೈಟೆಕ್ ಯುಗದಲ್ಲಿ ಅಂತಿರಾ...

ನಾ ಹೇಳ್ತ ಇರೊ ಪೀಪೀ ವಿಷೇಶ ಸ್ವರ ಹೋರಡಿಸುವಂತದ್ದು, ನನ್ನಂತ ಪ್ರೇಮಿಗಳಿಗೆ ಹ್ರದಯ ಬಡಿತ/ತುಡಿತ ಉಂಟು ಮಾಡುವಂತದ್ದು...ಕೇಳಿದಾಗ...ಓದಿದಾಗ...ಆಕಸ್ಮತ್ ಪಡೆದಾಗ... ಆಹಾ..ನಾ ಹೆಳ್ತಾ ಇರೊದು ಪ್ರಿಯತಮೆಯ ಪಪ್ಪಿ ಬಗ್ಗೆ!!! (ಪ್ರೀತಿಯಲ್ಲಿ short ಆಗಿ PP). ಸಾಮಾನ್ಯವಾಗಿ ಇದು ಬಳಕೆಯಾಗೋದು ಮೊಬಾಯಿಲ್ನಲ್ಲಿ, ಮಾತಾಡುತ್ತ ಇನ್ನೆನೋ ಪ್ರಿಯತಮೆಯ ಕರೆ ಮುಗಿದೊಗುತ್ತೆ ಅನ್ನೊವಾಗ, ಈ ಪೀಪೀ ಉಪಯೊಗಕ್ಕೆ ಬರುತ್ತದೆ... ನಾನಂತು ಗಕ್ಕನೆ ಪೀಪೀ ಅಂತೆನೆ...ಕೆಲವು ಸಲ ಅವಳು ನಾಚಿ ನೀರಾದರೂ, ನನ್ನ ಲಕ್ ಚೆನ್ನಗಿದ್ದರೆ, ನಾನು ಪುಕ್ಕಟೆ reply ಪಡೆಯುತ್ತೇನೆ..ಅಕಸ್ಮತ್ ಪಡೆಯದಿದ್ದಾಗ ಕಾದು ಕಾದು ನಾನೆ PP (ಪೆಕ್ರ ಪ್ರೇಮಿ) ಆಗುತ್ತೇನೆ...

ಈ ಪದದ ಬಳಕೆ ಮೊದಲ ಸಲ ಅವತರಿಸಿದ್ದೇ ನನ್ನಾಕೆಯ ಮೂಲಕ. ಅಂದು ನಾನು ಕಡಿಮೆ ಎಂದರೆ ಹತ್ತು ಪೀಪೀ ಪಡೆದಿದ್ದೆ (Hmm SMS ನಲ್ಲಿ)... ಇದೇನಪ್ಪ ಈ ರೀತಿ ಕಾಟ ಕೊಡುತಿದ್ದಾಳೆ ಎಂದು ಕರೆ ಮಾಡಿದರೆ ಫೊನ್ ಕಟ್ ಮಾಡ್ತಿದ್ದಳು. ಕೊನೆಗೂ ಬೆಸತ್ತು ನಾನೆ ಇನ್ವೆಸ್ಟಿಗೇಶನ್ ಶುರು ಹಚ್ಕೊಂಡೆ. ಹೆದರಿಕೆ ಎಂಬ ಪೀಡೆ ಮನಸೆಲ್ಲ ತುಂಬಿ, "ನನ್ನ ಕೈ ಬಿಡಲು", "ನನಗೆ ಕೈ ಕೊಡಲು", ಅವಳಾಡುತ್ತಿರುವ ಮೊದಲ(ಅಥವ ಕೊನೆಯ) ಆಟವಾಗಿರಬಹುದೇ ಅಂದುಕೊಂಡು ಎದೆ ಡವಡವ ಅನ್ನತೊಡಗಿತು. ಕೊನೆಗೂ ಸೋತು internet ಮುಂದೆ ಕೂತ್ಕೊಂಡು google ಗೆಳೆಯನನ್ನು ಕೇಳೋಣ ಅಂದರೆ, ಜೀವನದಲ್ಲಿ ಮೊದಲ ಸಲ 'ಪರೋಪಕಾರಿ' ಗೆಳೆಯನಿಂದ ಉಪಯೋಗವಾಗಲಿಲ್ಲ...ಅಂತು ಇಂತೂ ನನ್ನ ಆ ಪರೀಕ್ಶಾ ಸಮಯ ಮುಗಿದು, ನನ್ನಾಕೆ ಸಿಹಿ ಸುದ್ದಿ ಕೊಟ್ಟಿದ್ದಳು...ಪ್ರತಿಕ್ರಿಯಿಸಿದೆ ನಾನೊಂದು ಪೀP ಮೂಲಕ...

ನನ್ನಾಕೆಯ ಈ ಹೊಸ ಪದದಿಂದ ಪ್ರೇರಿತನಾದ ನಾನು, ಯತೇಚ್ಚವಾಗಿ ನನ್ನ SMS ಗಳಲ್ಲಿ 'ಪೀP' ಉಪಯೋಗಿಸುತ್ತಿದ್ದೇನೆ...ಕೆಲವು ಸಲ ಅವಳ ಕಡೆಯಿಮ್ದ reply ಪಡೆದು ಪೀಪಿ ಊದಿದ್ದಷ್ಟೆ ಕುಶಿ ಆಗುತ್ತದೆ...
ನೀವು ಈ short form ಉಪಯೊಗಿಸಿ, (Conditions Apply: ನಿಮ್ಮ ಪ್ರಿಯತಮ/ಪ್ರಿಯತಮೆ ಗೆ ಮಾತ್ರ) SMS ಮೂಲಕ ಪ್ರೀತಿಯ ಮಳೆ ಹರಿಸಿ...ನಿಮ್ಮ ಅನುಭವ ಪ್ರೀತಿಯಿಂದ ನನಗೂ ತಿಳಿಸಿ...

ಸಣ್ಣ ಕತೆಗಳು

ಗೆಳೆಯನ ಪ್ರಿಯತಮೆಯ ಬಗ್ಗೆ ಆತನಿಂದ ಕೇಳುತಿದ್ದ ಬಹು ವಿಜ್ರಂಭಿತ ಗುಣಗಾನಗಳನ್ನು ತಿಳಿದು ರೋಸಿ ಹೋಗಿದ್ದ ಮನಸ್ಸು ಆಕೆಯ ದಡೂತಿ ದೇಹ ನೋಡಿ ಕಿಲಕಿಲ ನಕ್ಕಿ, ಸಮಧಾನಗೊಂಡಿತು.
***
ಸಾಯಲು ಹೊರಟವನು ಒಣಭೂಮಿಯಲ್ಲಿ ಒಣಗಿದ ಒಂಟಿ ಕಲ್ಪವ್ರುಕ್ಶವು ನೀಡುತ್ತಿದ್ದ ತಣ್ಣನೆಯ ಗಾಳಿಯನ್ನು ಆಸ್ವಾಧಿಸಿ, ತನ್ನ ವಿಚಾರಧಾರೆಯ ಬದಲಾಯಿಸಿ ತಿರುಗಿ ಮನೆಗೆ ಹೊರಟನು.